Viral video : ಮದುವೆ ಮಂಟಪದದಲ್ಲಿಯೇ ಹೊಡೆದಾಡಿಕೊಂಡ ವಧು ವರ, ನೆಂಟರಿಷ್ಟರು ಸುಸ್ತೋ ಸುಸ್ತು

ಮದುವೆ ಎಂದ  ಕೂಡಲೇ ಅಲ್ಲಿ ಹಾಡು , ಕುಣಿತ, ತಮಾಷೆ ಸಂತೋಷ ಕಣ್ಣ ಮುಂದೆ ಬರುತ್ತದೆ. ಅಬ್ಬಬ್ಬಾ ಅಂದರೆ ವಧುವನ್ನು ಬೀಳ್ಕೊಡುವ ವೇಳೆ ಸ್ವಲ್ಪ ಭಾವಾನಾತ್ಮಕ ಸನ್ನಿವೇಶ ಸೃಷ್ಟಿಯಾಗಬಹುದು. ಆದರೆ ಇಲ್ಲಿ ವದು ವರರು ಮಂಟಪದಲ್ಲಿಯೇ ಹೊಡೆದಾಡುವ ಮಟ್ಟಕ್ಕೆ ಹೋಗಿದ್ದಾರೆ.

Written by - Ranjitha R K | Last Updated : Mar 2, 2022, 02:04 PM IST
  • ಇಂಟರ್ನೆಟ್ ಜಗತ್ತು ಒಂದು ಮೋಜಿನ ಜಗತ್ತು.
  • ಇತ್ತೀಚಿನ ದಿನಗಳಲ್ಲಿ ಮದುವೆಯ ವಿಡಿಯೋಗಳು ಭಾರೀ ಸದ್ದು ಮಾಡುತ್ತಿವೆ.
  • ಒಂದು ಕುತೂಹಲಕಾರಿ ವೀಡಿಯೋ ವೈರಲ್ ಆಗುತ್ತಿದೆ
Viral video : ಮದುವೆ ಮಂಟಪದದಲ್ಲಿಯೇ ಹೊಡೆದಾಡಿಕೊಂಡ ವಧು ವರ, ನೆಂಟರಿಷ್ಟರು  ಸುಸ್ತೋ ಸುಸ್ತು  title=
ಒಂದು ಕುತೂಹಲಕಾರಿ ವೀಡಿಯೋ ವೈರಲ್ ಆಗುತ್ತಿದೆ (photo instagram)

ನವದೆಹಲಿ : ಈ ಇಂಟರ್ನೆಟ್  ಜಗತ್ತೇ ಹಾಗೆ. ಇಲ್ಲಿ ಕುಳಿತರೂ ಸುದ್ದಿ ಎದ್ದರೂ  ಸುದ್ದಿ. ದಿನ ಬೆಳಗಾದರೆ ಸಾಕು ಇಲ್ಲಿ ಸಾವಿರಾರು ವಿಡಿಯೋಗಳನ್ನು ನೋಡಬಹುದು (Viral video). ಇವುಗಳಲ್ಲಿ ಕೆಲವೊಂದು ವಿಡಿಯೋಗಳು ನಮ್ಮ ಮನಸ್ಸಿಗೆ ಸಣ್ಣಗೆ ಕಚಗುಳಿಯಿಟ್ಟರೆ, ಇನ್ನು ಕೆಲವು ದೃಶ್ಯಗಳನ್ನು ನೋಡಿದರಂತೂ ನಗು ತಡೆಯುವುದೇ ಇಲ್ಲ (Funny video). ಅದೇ  ರೀತಿ ಸಾಕಷ್ಟು ಭಾವನಾತ್ಮಕ ವಿಡಿಯೋಗಳನ್ನು  ಕೂಡಾ ಇಲ್ಲಿ ಕಾಣಬಹುದು (emotional video). 

ಸಾಮಾಜಿಕ ಜಾಲತಾಣಗಳಲ್ಲಿ (Social media) ಹಲವು ರೀತಿಯ ವಿಡಿಯೋಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ. ಇಲ್ಲಿ ಅನೇಕ ಮದುವೆಯ ವಿಡಿಯೋಗಳನ್ನು ನೋಡಬಹುದು. ಈಗ ಎಲ್ಲರ ಗಮನ ಸೆಳೆದಿರುವ ವಿಡಿಯೋ ಕೂಡಾ ಮದುವೆಗೆ ಸಂಬಂಧಿಸಿದ್ದೇ ಆಗಿದೆ (wedding video). 

ಇದನ್ನೂ ಓದಿ : 'Srivalli' ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯ Swag Dance, ಫಿದಾ ಆಗಲಿದ್ದಾನೆಯೇ 'Pushpa'?

ಮದುವೆ ಎಂದ ಕೂಡಲೇ ಅಲ್ಲಿ ಹಾಡು , ಕುಣಿತ, ತಮಾಷೆ ಸಂತೋಷ ಕಣ್ಣ ಮುಂದೆ ಬರುತ್ತದೆ. ಅಬ್ಬಬ್ಬಾ ಅಂದರೆ ವಧುವನ್ನು ಬೀಳ್ಕೊಡುವ ವೇಳೆ ಸ್ವಲ್ಪ ಭಾವಾನಾತ್ಮಕ ಸನ್ನಿವೇಶ ಸೃಷ್ಟಿಯಾಗಬಹುದು. ಆದರೆ, ಇಲ್ಲಿ ವಧು ವರರು ಮಂಟಪದಲ್ಲಿಯೇ ಹೊಡೆದಾಡುವ ಮಟ್ಟಕ್ಕೆ ಹೋಗಿದ್ದಾರೆ.  ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (Wedding viral video).

 

ಈ ವೈರಲ್ ವೀಡಿಯೊದಲ್ಲಿ (Viral video), ಮದುವೆಯ ವೇದಿಕೆಯಲ್ಲಿ ವಧು-ವರರಿಬ್ಬರನ್ನೂ ನೋಡಬಹುದು. ಅಲ್ಲಿ ವಧು ಮತ್ತು ವರನ ಅನೇಕ ಸಂಬಂಧಿಕರು ಕೂಡಾ ಕಾಣಿಸುತ್ತಾರೆ. ವರ ಇಲ್ಲಿ ವಧುವಿಗೆ ಸಿಹಿತಿಂಡಿ ತಿನ್ನಿಸಲು ಹೋಗುತ್ತಾನೆ (Funny video). ಆದರೆ ವಧು ಅದನ್ನು ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ವರ ತಿಂಡಿಯನ್ನು ವಧುವಿನ ಮುಖದ ಮೇಲೆ ಎಸೆಯುತ್ತಾನೆ. ಇಷ್ಟಕ್ಕೆ ವಧು ಸುಮ್ಮನಿರಬೇಕಲ್ಲ. ವಧು ಕೂಡಾ ತಿಂಡಿಯನ್ನು ವರನ ಮುಖದ ಮೇಲೆ ಎಸೆಯುತ್ತಾಳೆ. ಇಲ್ಲಿಗೆ ವರನ ಕೋಪ ನೆತ್ತಿಗೇರಿದೆ. ಮದುವೆ ಮನೆ ಅನ್ನುವುದನ್ನೂ  ಲೆಕ್ಕಿಸದೆ ವಧುವಿನ ಕಪಾಳಕ್ಕೆ ಬಾರಿಸಿದ್ದಾನೆ. 

ಇದನ್ನೂ ಓದಿ : WATCH: ರೈಲಿನ ಕೆಳಗೆ ಸಿಕ್ಕಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಭೂಪಾಲ್ ವ್ಯಕ್ತಿ..!

ಈ ವಿಡಿಯೋದಲ್ಲಿ (Viarl video) ವಧು-ವರರ ನಡುವಿನ ಜಗಳ ನೋಡಿ ಅತಿಥಿಗಳೂ ಬೆರಗಾಗಿದ್ದಾರೆ. ಈ ವೀಡಿಯೊವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News